ಕರ್ನಾಟಕ ಚುನಾವಣೆ 2018ರ ಬಗ್ಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ | Oneindia Kannada

2017-12-11 265

'ನಮ್ಮ ತಂದೆಗೊಸ್ಕರ ರಾಜ್ಯದಲ್ಲಿ ಪಕ್ಷದ ಪರ ಪ್ರಚಾರ ಮಾಡುವೆ ನನಗೆ ಅಭ್ಯರ್ಥಿಯಾಗುವ ಆಸೆ ಇಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್‌ಗೌಡ ರಾಮನಗರದಲ್ಲಿ ತಿಳಿಸಿದರು. ಕಾರ್ಯನಿಮಿತ ಮೈಸೂರಿಗೆ ತೆರಳುತ್ತಿದ್ದ ನಿಖಿಲ್‌ ಅವರನ್ನು ರಾಮನಗರದಲ್ಲಿಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನ ಪಕ್ಷದ ವರಿಷ್ಠರು ಹಾಗೂ ಮುಖಂಡರು ತೀರ್ಮಾನ ಮಾಡುತ್ತಾರೆ. ನನಗೆ ಅಭ್ಯರ್ಥಿಯಾಗುವ ಯಾವುದೇ ಆಸೆ ಇಲ್ಲ ಸದ್ಯಕ್ಕೆ ಸಿನಿಮಾ ರಂಗದಲ್ಲಿ ಇದ್ದೇನೆ ಚುನಾವಣೆಗೆ ನಿಲ್ಲುವ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂದುನಿಖಿಲ್‌ ಹೇಳಿದರು.75 ದಿನಗಳ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿದಿದೆ ಇದೇ ತಿಂಗಳ 16 ರಂದು ಮೊದಲ ಟೀಸರ್ ಬಿಡುಗಡೆ ಮಾಡಲಾಗುವುದು ಅಂದು ನನ್ನ ತಂದೆ ಅವರ ಹುಟ್ಟು ಆ ದಿನದಂದು ಟೀಸರ್ ಬಿಡುಗಡೆ ಮಾಡಲಾಗುವುದು ಎಂದ ನಿಖಿಲ್, ಮೊದಲ ಟೀಸರ್ ಮಾಗಡಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ಮೂಲಕ ಮಾಗಡಿಯಲ್ಲಿ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಟಾಂಗ್ ಕೊಡುವ ಮುನ್ಸೂಚನೆ ನೀಡಿದರು.